Alvas Schools

ಕುಡಿಯುವ ನೀರಿನ ಬಾಟಲು(Metal Flask) ಕೊಡುಗೆ

ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲಾ ಸಂಯೋಜಕರಾದ ಸಂತೋಷ್ ಆಚಾರ್ಯ ಇವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಲೋಹದ ಕುಡಿಯುವ ನೀರಿನ ಬಾಟಲನ್ನು ಕೊಡುಗೆಯಾಗಿ ನೀಡಿದರು. ಸ್ವಚ್ಛ ಭಾರತದ ಅಂಗವಾಗಿ ಪ್ಲಾಸ್ಟಿಕ್ ತ್ಯಜಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಕೊಡುಗೆ ನೀಡಲಾಯಿತು. 💐💐ಅಭಿನಂದನೆಗಳು💐💐

Read More

ಕಾವಾ, ಜಾಣ, ರತ್ನ ಪರೀಕ್ಷೆ

ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಪ್ರವೇಶ, ಕಾವಾ, ಜಾಣ, ರತ್ನ ಪರೀಕ್ಷೆಗಳು ಡಿಸೆಂಬರ್ 27, 28, 29 ರಂದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಪ್ರವೇಶ-62, ಕಾವಾ-16, ರತ್ನ-10 ಹೀಗೆ ಒಟ್ಟು ಸುಮಾರು 88 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡರು. ಬೆಂಗಳೂರಿನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|ನರಸಿಂಹಯ್ಯನವರು ಪರೀಕ್ಷಾ ಅಭಿರಕ್ಷಕರಾಗಿ ಹಾಗೂ ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶ್ರೀನಿಧಿ ಯಳಚಿತ್ತಾಯರವರು ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನೆರವೇರಿಸಿದರು. ಆಳ್ವಾಸ್ ಶಾಲೆಗಳ ಕನ್ನಡ ಶಿಕ್ಷಕರು […]

Read More

ವಿಶ್ವ ಮಾನವತಾ ದಿನಾಚರಣೆ

ರಾಷ್ಟಕವಿ ಕುವೆಂಪುರವರ ಜನ್ಮ ದಿನಾಚರಣೆಯ ಅಂಗವಾಗಿ ವಿಶ್ವ ಮಾನವತಾ ದಿನಾಚರಣೆಯನ್ನು ಡಿಸೆಂಬರ್ 29ರಂದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು. ಮುಖ್ಯೋಪಾಧ್ಯಾಯರಾದ ಪ್ರಶಾಂತ್ ಬಿ. ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ದಿನದ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಶಾಲಾ ಶಿಕ್ಷಣ ಸಂಯೋಜಕ, ಶಿಕ್ಷಕ ಸಂತೋಷ್ ಆಚಾರ್ಯ ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ನಂದಿನಿಯವರು ಉಪಸ್ಥಿತರಿದ್ದರು.

Read More

Back To Top